Index   ವಚನ - 63    Search  
 
ಧೀರನೆಂದು ಬೀದಿಯಲ್ಲಿ ನುಡಿಯಲೇಕೆ? ಕಾವಲ್ಲಿ ಕಾಣಬಹುದು. ವಿರಕ್ತನೆಂದು ನುಡಿಯ ನುಡಿಯಲೇಕೆ? ಮಹಾಜ್ಞಾನಿಗಳು ನೋಡಲೊಡನೆ ಕಾಣಬಹುದು. ನಾನೆ ಬ್ರಹ್ಮವೆಂಬ ಭವಗೇಡಿಗಳ ಮೆಚ್ಚುವನೆ ಅಮುಗೇಶ್ವರಲಿಂಗವು?