Index   ವಚನ - 65    Search  
 
ನಾನೆ ಕರ್ತನೆಂದು ಹಾಡಿದೆನು ವಚನವ. ನಾನೆ ನಿತ್ಯನೆಂದು ಕಟ್ಟಿದೆನು ಬಿರಿದ. ನಾನೆ ನಿರವಯಸ್ಥಲದಲ್ಲಿ ನಿಂದು ಓದಿದೆನು ವಚನವ. ನಾ ಓದಿದುದೆಲ್ಲಾ ನೀ ಓದಿದುದು, ನಾ ಕಟ್ಟಿದ ಬಿರಿದು ನಿನ್ನ ಬಿರಿದು. ನಾನರಿದ ಅರಿವೆಲ್ಲಾ ನಿನ್ನರಿವು. ನಾ ಕಟ್ಟಿದ ಬಿರಿದಿಂಗೆ ಹಿಂದೆಗೆವನಲ್ಲ. ಅಮುಗೇಶ್ವರಲಿಂಗಕ್ಕೂ ಎನಗೂ ಪ್ರಭುದೇವರೆ ಗುರುವಲ್ಲದೆ ಈರೇಳು ಲೋಕ ಹದಿನಾಲ್ಕು ಭುವನದಲ್ಲಿ ಆರನೂ ಕಾಣೆ