ನಾನೆ ಗುರುವಾದಬಳಿಕ ಇನ್ನಾರ ನೆನೆವೆನಯ್ಯಾ?
ನಾನೆ ಲಿಂಗವಾದಬಳಿಕ ಇನ್ನಾರ ನೆನೆವೆನಯ್ಯಾ?
ನಾನೆ ಜಂಗಮವಾದಬಳಿಕ ಇನ್ನಾರ ನೆನೆವೆನಯ್ಯಾ?
ಎನಗೆ ಗುರುವಾದಾತನು ನೀನೆ,
ಎನಗೆ ಲಿಂಗವಾದಾತನು ನೀನೆ.
ಎನಗೆ ಜಂಗಮವಾದಾತನು ನೀನೆ.
ಎನಗೆ ಪಾದೋದಕ ಪ್ರಸಾದವಾದಾತನು ನೀನೆ.
ಅಮುಗೇಶ್ವರಲಿಂಗವಾಗಿ
ಎನ್ನ ಕರಸ್ಥಲಕ್ಕೆ ಬಂದಾತನು ನೀನೆ, ಪ್ರಭುವೆ.
Art
Manuscript
Music
Courtesy:
Transliteration
Nāne guruvādabaḷika innāra nenevenayyā?
Nāne liṅgavādabaḷika innāra nenevenayyā?
Nāne jaṅgamavādabaḷika innāra nenevenayyā?
Enage guruvādātanu nīne,
enage liṅgavādātanu nīne.
Enage jaṅgamavādātanu nīne.
Enage pādōdaka prasādavādātanu nīne.
Amugēśvaraliṅgavāgi
enna karasthalakke bandātanu nīne, prabhuve.