Index   ವಚನ - 67    Search  
 
ನಾನೆ ಗುರುವಾದಬಳಿಕ ಗುರುವೆಂಬುದಿಲ್ಲ. ನಾನೆ ಲಿಂಗವಾದಬಳಿಕ ಲಿಂಗವೆಂಬುದಿಲ್ಲ. ನಾನೆ ಜಂಗಮವಾದಬಳಿಕ ಜಂಗಮವೆಂಬುದಿಲ್ಲ. ನಾನೆ ಪ್ರಸಾದವಾದಬಳಿಕ ಪ್ರಸಾದವೆಂಬುದಿಲ್ಲ. ಅಮುಗೇಶ್ವರನೆಂಬ ಲಿಂಗವು ತಾನೆಯಾದ ಬಳಿಕ ಲಿಂಗವನರಿದೆನೆಂಬ ಹಂಗಿನವನಲ್ಲ.