Index   ವಚನ - 69    Search  
 
ನಿತ್ಯನಾಗಿ ಇಷ್ಟಲಿಂಗವನಪ್ಪಿದ ಶರಣನಿರವ ಭ್ರಷ್ಟಭವಿಗಳೆತ್ತ ಬಲ್ಲರೊ? ನೆಟ್ಟನೆ ನಿಂದು ಮುಟ್ಟಿದೆನು ಶಿವನ ಪಾದವ. ಎನ್ನಲಿ ಕೆಟ್ಟಗುಣ ಹೊದ್ದಲಿಲ್ಲವೆಂದು ಮುಟ್ಟಿದೆನು ಎನ್ನ ಇಷ್ಟಲಿಂಗವ. ಕೆಟ್ಟ ಭವಭಾರಿಗಳ ಕಂಡಡೆ ಭ್ರಷ್ಟರೆಂದು ನಿಮ್ಮನಪ್ಪಿಕೊಂಬೆನು ಅಮುಗೇಶ್ವರಾ.