Index   ವಚನ - 70    Search  
 
ನಿರವಯಸ್ಥಲದಲ್ಲಿ ನಿಂದ ಅಭೇದ್ಯನ ಅರಿವಿನ ವಚನವುಳ್ಳವಂಗೆ ಅಂಗದ ಹಂಗೇಕೆ? ಅರಿವುಳ್ಳವಂಗೆ ಗುರುವಿನ ಹಂಗೇಕೆ? ಅರಿವುಳ್ಳವಂಗೆ ಲಿಂಗದ ಹಂಗೇಕೆ? ಅರಿವುಳ್ಳವಂಗೆ ಜಂಗಮದ ಹಂಗೇಕೆ? ಅರಿವುಳ್ಳವಂಗೆ ಪಾದೋದಕ ಪ್ರಸಾದದ ಹಂಗೇಕೆ? ಅರಿವುಳ್ಳವಂಗೆ ಅಮುಗೇಶ್ವರಲಿಂಗವನರಿದೆನೆಂಬ ಸಂದೇಹವೇಕೆ?