Index   ವಚನ - 74    Search  
 
ನೀರೊಳಗೆ ಹೋದವನ ಹೆಜ್ಜೆಯ ಕಾಬವರುಂಟೆ? ಅಂದಳವನೇರಿದ ಆತ್ಮನ ಹೆಜ್ಜೆಯ ಕಾಬವರುಂಟೆ? ಆನೆಯನೇರಿಕೊಂಡು ಅರಿವನರಸುವನಂತೆ, ಜ್ಞಾನಿಗಳ ಸಂಗದಲ್ಲಿರ್ದು ಆತ್ಮತೇಜಕ್ಕೆ ಹೋರುವನಂತೆ, ನಾನು ನೀನೆಂಬುದನಳಿದು ತಾನೆಯಾಗಿರಬಲ್ಲಡೆ ಅಮುಗೇಶ್ವರಲಿಂಗವು ತಾನೆ ಎಂಬೆನು?