Index   ವಚನ - 78    Search  
 
ಬಲ್ಲೆನೆಂಬ ವಿರಕ್ತರು ಬಾಯಿದೆರೆದು ಬಲ್ಲೆವೆಂದು ನುಡಿಯದಿರಿ. ಬಲ್ಲತನಕ್ಕೆ ಹೋರಿಯಾಡಲೇಕೆ? ಮಹಾಜ್ಞಾನಿಗಳು ಬಂದು ಬಲ್ಲೆಯಾ ಎಂದಡೆ ಬಲುಗೈಯ ಅರಿಯೆನೆನ್ನಬೇಕು. ಇದಕೆ ತರ್ಕವೇಕೆ ಅಮುಗೇಶ್ವರಲಿಂಗವನರಿದವಂಗೆ.