Index   ವಚನ - 77    Search  
 
ಪೊಡವಿಯನಾಳುವರ ದೊರೆಗಳೆಂಬೆನೆ? ಮೃಡನ ವೇಷವ ಧರಿಸಿದವರ ಕಡುಗಲಿಗಳೆಂಬೆನೆ? ಅರಿವು ಆಚಾರವನರಿಯದವರ ಲಿಂಗೈಕ್ಯರೆಂಬೆನೆ? ಎನ್ನೆನಯ್ಯಾ ಅಮುಗೇಶ್ವರಲಿಂಗವೆ.