Index   ವಚನ - 110    Search  
 
ಸಿಂಹದಮರಿಯ ಸೀಳ್ನಾಯ ಸರಿ ಎನ್ನಬಹುದೆ? ವರಹ ಕುಕ್ಕುಟನ ಸರಿ ಎನ್ನಬಹುದೆ? ಹೊನ್ನು ಹೆಣ್ಣು ಮಣ್ಣ ಹಿಡಿದು ಲಿಂಗೈಕ್ಯರೆನಿಸಿಕೊಂಬ ಅಜ್ಞಾನಿಗಳೆಲ್ಲರು ಸೀಳ್ನಾಯಿಗಳೆಂಬೆನಯ್ಯಾ. ಸಮ್ಯಕ್‍ಜ್ಞಾನವ ಮುಂದುಗೊಂಡು ಸದಾಚಾರಿಯಾಗಿ ಭಕ್ತಿ ಭಿಕ್ಷವ ಬೇಡಬಲ್ಲಡೆ, ನಿತ್ಯಲಿಂಗೈಕ್ಯರೆಂಬೆ. ಅಮುಗೇಶ್ವರನೆಂಬ ಲಿಂಗಕ್ಕೆ ಅತ್ತತ್ತಲಾದ ಘನಮಹಿಮನೆಂಬೆನಯ್ಯಾ.