Index   ವಚನ - 111    Search  
 
ಸುಳಿವ ಸುಳುಹು ಅಡಗಿತ್ತೆನಗೆ. ಎನ್ನ ಕಂಗಳ ಕಾಮ ಕಳೆಯಿತ್ತು. ಅರಿದೆನೆಂಬ ಮನ ಅಡಗಿದುದ ಕಂಡು ನನ್ನ ನಾನೆ ತಿಳಿದು ನೋಡಿ, ಕಟ್ಟಿದೆನು ಕಾಮನ ಮೇಲೆ ಬಿರಿದ. ಮಾಯಾ ಯೋನಿಗಳಲ್ಲಿ ಹುಟ್ಟಿದರೆಲ್ಲ, ನಿರ್ಮಾಯನೆಂಬ ಗಣೇಶ್ವರಗೆ ಸರಿಯಪ್ಪರೆ? ಬ್ರಹ್ಮ ವಿಷ್ಣು ರುದ್ರರೆಲ್ಲರು ಮಾಯಾಕೋಳಾಹಳನೆಂಬ ಪ್ರಭುವಿಂಗೆ ಸರಿಯಲ್ಲವೆಂದು ಕಟ್ಟಿದೆ ಕೈದುವ. ಸರಿಯೆಂದು ನುಡಿವವರ ಪರಿಪರಿಯಲಿ ಮೆಟ್ಟಿ ಸೀಳುವೆನು ಕಾಣಾ. ಅಮುಗೇಶ್ವರಲಿಂಗಕ್ಕೆ ಅಧಿಕನಾದನಯ್ಯಾ ಪ್ರಭುದೇವರು.