Index   ವಚನ - 112    Search  
 
ಸೂರ್ಯಂಗೆ ಅಲ್ಲಿ ಇಲ್ಲಿ ಎಂಬ ಸಂದೇಹವುಂಟೆ? ಎಲ್ಲೆಲ್ಲಿಯೂ ತನ್ನ ಪ್ರಭೆಯ ಬೀರುತಿಪ್ಪುದು. ಬಲ್ಲ ಘನಮಹಿಮನ ಎಲ್ಲರು ಜರಿದಡೇನು ಕಿಂಕಿಲನೆ? ಸರ್ವಾಂಗವು ಲಿಂಗವಾದ ನಿರಾಲಂಬಿ ಕಾಬರ ಕಂಡು ತಾ ಕಾಬವನಲ್ಲ; ಅರಿವವರ ಕಂಡು ತಾನರಿವವನಲ್ಲ; ಬಿಡುವವರ ಕಂಡು ತಾ ಬಿಡುವವನಲ್ಲ; ಹಿಡಿದ ಛಲವ ತಾ ಬಿಡುವವನಲ್ಲ, ಅಮುಗೇಶ್ವರಲಿಂಗವನರಿದವನು.