Index   ವಚನ - 115    Search  
 
ಹೊಟ್ಟೆಯ ಹೊರೆವ ಪಶು, ಕಟ್ಟಿ ಕೊಲ್ಲುವುದ ಬಲ್ಲುದೆ? ಕಷ್ಟಜೀವಗಳ್ಳರು; ಕರ್ತುವಿನ ವೇಷವ ತೊಟ್ಟು- ಕತ್ತೆಯಂತೆ ತಿರುಗುವ ಕಳ್ಳರನೊಲ್ಲ ಅಮುಗೇಶ್ವರಲಿಂಗವು.