Index   ವಚನ - 116    Search  
 
ಹೊನ್ನ ಬಿಟ್ಟಡೇನು, ಹೆಣ್ಣ ಬಿಟ್ಟಡೇನು, ಮಣ್ಣ ಬಿಟ್ಟಡೇನು, ವಿರಕ್ತನಾಗಬಲ್ಲನೆ? ಆದ್ಯರ ವಚನಂಗಳ ಹತ್ತುಸಾವಿರವ ಲೆಕ್ಕವಿಲ್ಲದೆ ಓದಿದಡೇನು,ನಿತ್ಯರಾಗಬಲ್ಲರೆ? ಮಂಡೆಯ ಬೋಳಿಸಿಕೊಂಡು ಅಂದಚಂದಕೆ ತಿರುಗುವ ಜಗಭಂಡರ ಮೆಚ್ಚುವನೆ, ಅಮುಗೇಶ್ವರಲಿಂಗವು?