ಆರಾರು ಒಳಗೆನಿಲ | ಲಾರು ಸ್ಥಲವು ಬೇಕು |
ಆರು ಮೊಗವಾರು ಕರವರಿದ ಉತ್ತಮನು |
ಸೇರುವನು ಶಿವನ ! ಸರ್ವಜ್ಞ
Art
Manuscript
Music
Courtesy:
Transliteration
Ārāru oḷagenila | lāru sthalavu bēku |
āru mogavāru karavarida uttamanu |
sēruvanu śivana! Sarvajña
ಶಬ್ದಾರ್ಥಗಳು
ಆಯ = ಯಾವ ಕುಲಜಾತಿಯವರಾದರೂ; ಆಯ+ಕರವ+ಅರಿದ = 1) ಸುಚಿತ್ತ 2) ಸುಬುದ್ದಿ 3) ಸುಮನ 4) ನಿರಹಂಕಾರ್ಯ 5) ಸುಜ್ಞಾನ 6) ಸದ್ಬಾವೆಂಬ ಆರು ಕೈಗಳನ್ನು ತಿಳಿದ
ಇಲ್ಲವೆ ಷಡ್; ಆರ ಮೊಗ = ಶಿವನಿಗೆ ಸದ್ಯೋಜಾತಾದಿ ಅಘೋರಾಂತವಾದ ಐದು ಮುಖಗಳಲ್ಲದೆ ಪಾತಾಳಮುಖವೆಂಬದಿನ್ನೊಂದು
ಮುಖವಿರುವುದು ಇದನ್ನು ತತ್ವಜ್ಞರಲ್ಲದ; ಆರುಸ್ಥಲವು = ಭಕ್ತಾದಿ ಐಕ್ಯಾಂತವಾದ ಷಟ್ಥ್ಸಲಗಳು; ಉತ್ತಮನು = ತತ್ವಜ್ಞನು; ಒಳಗೆ = (ಶಿವಸುಖದಲ್ಲಿ) ಕೈವಲ್ಯದಲ್ಲಿ; ನಿಲಲು = ಸೇರಲು(ಅಪೇಕ್ಷಿಸಿದರೆ);