ಆಗಿಲ್ಲ ಹೊಗಿಲ್ಲ ಮೇಗಿಲ್ಲ ಕೆಳಗಿಲ್ಲ |
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕೆ |
ದೇಗುಲವೆ ಇಲ್ಲ ಸರ್ವಜ್ಞ
Art
Manuscript
Music
Courtesy:
Transliteration
Āgilla hogilla mēgilla keḷagilla |
tāgilla tappu taḍeyilla liṅgake |
dēgulave illa sarvajña
ಶಬ್ದಾರ್ಥಗಳು
ಆಗಿಲ್ಲ ಹೋಗಿಲ್ಲ = ಅನಾದ್ಯನಂತ; ಕಾಲಾತೀತ; ತಡೆಯಿಲ್ಲ = ಅಡ್ಡಿಯಿಲ್ಲ=ಸರ್ವತಂತ್ರ ಸ್ವತಂತ್ರ; ತಪ್ಪಿಲ್ಲ = ನಿತ್ಯಮುಕ್ತ; ತಾಗಿಲ್ಲ = ಸರಿಯಾದದ್ದು ಇನ್ನೊಂದಿಲ್ಲ; ದೇಗುಲವೆ ಇಲ್ಲ = (ಇಂತಪ್ಪ ಲಿಂಗಕ್ಕೆ) ಗುಡಿಯೇ ಇಲ್ಲ; ಮೇಗಿಲ್ಲ, ಕೆಳಗಿಲ್ಲ = ಸ್ಥಳಾತೀತ;