ತೂಬರದ ಕೊಳ್ಳಿಯಂತೆ ಉರಿವಾತ ಭಕ್ತನೆ?
ಹುಸಿದು ತಂದು ಮಾಡುವಾತ ಭಕ್ತನೆ?
ಭಕ್ತರ ಕುಲವನೆತ್ತಿ ನಿಂದಿಸುವಾತ ಭಕ್ತನೆ?
'ನಿಂದಯಾ ಶಿವಭಕ್ತಾನಾಂ ಕೋಟಿ ಜನ್ಮನಿ ಸೂಕರಃ |
ಸಪ್ತಜನ್ಮನಿ ಭವೇತ್ ಕುಷ್ಠೀ ದಾಸೀಗರ್ಭೇಷು ಜಾಯತೇ ||'
ಎಂದುದಾಗಿ, ತನ್ನ ಪ್ರಾಣದ ಮೇಲೆ ಬಂದಡೂ ಬರಲಿ, ಇವರ ಬಿಡಬೇಕು.
ಬಿಡದಿರಲು ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
Art
Manuscript
Music
Courtesy:
Transliteration
Tūbarada koḷḷiyante urivāta bhaktane?
Husidu tandu māḍuvāta bhaktane?
Bhaktara kulavanetti nindisuvāta bhaktane?
'Nindayā śivabhaktānāṁ kōṭi janmani sūkaraḥ |
saptajanmani bhavēt kuṣṭhī dāsīgarbhēṣu jāyatē ||'
endudāgi, tanna prāṇada mēle bandaḍū barali, ivara biḍabēku.
Biḍadiralu uriliṅgapeddigaḷarasanollanavvā.