ಕುಂಡಲಿಯಕಂಡಾತ ಹೆಂಡತಿಗೆ ಒಲೆಯುವನೇ? |
ಖಂಡಿತದೊಳಿಪ್ಪ ಶಿವಯೋಗಿ ಮಾಂಸದ |
ಪಿಂಡಕೊಲಿಯುವನೆ ಸರ್ವಜ್ಞ
Art
Manuscript
Music
Courtesy:
Transliteration
Kuṇḍaliyakaṇḍāta heṇḍatige oleyuvanē? |
Khaṇḍitadoḷippa śivayōgi mānsada |
piṇḍakoliyuvane sarvajña
ಶಬ್ದಾರ್ಥಗಳು
ಕುಂಡಲಿಯ ಕಂಡಾತ = ಕುಂಡಾಲಿ ಸರ್ಪವನ್ನು ಊರ್ಧ್ವಮುಖ ಮಾಡಿದವನು; ಖಂಡಿತ = ಕೈವಲ್ಯಾನಂದ; ಮಾಂಸದ ಪಿಂಡ = ಇಂದ್ರಿಯ ಸುಖ; ಹೆಂಡತಿ = ಸ್ತ್ರೀಸುಖ;