•  
  •  
  •  
  •  
Index   ವಚನ - 235    Search  
 
ನೀರೊಳಗಣ ಜ್ಯೋತಿ ಮೇರುವ ನುಂಗಿತ್ತು. ದೂರ[ದ] ಧಾತು ಸಾರಾಯದೊಳಡಗಿತ್ತು. ಪುರದೊಳಗೈವರ ಶಿರವರಿದು, ಪರಿಮಳದೋಕುಳಿಯನಾಡಿತ್ತ ಕಂಡೆ. ಸಾರಿರ್ದ ಬ್ರಹ್ಮನ ಓಲಗ ಹರೆಯಿತ್ತು, ಘೋರ ರುದ್ರನ ದಳ ಮುರಿಯಿತ್ತು-ಗುಹೇಶ್ವರಾ.
Transliteration Nīroḷagaṇa jyōti mēruva nuṅgittu. Dūra[da] dhātu sārāyadoḷaḍagittu. Puradoḷagaivara śiravaridu, parimaḷadōkuḷiyanāḍitta kaṇḍe. Sārirda brahmana ōlaga hareyittu, ghōra rudrana daḷa muriyittu-guhēśvarā.
Hindi Translation जलांतर्गत ज्योति मेरु निगली थी , दूर का धातु साराय में छिपा हुआ था। पुर के पाँचों के शिर फटकर खुशबू फैली देखी। सारी ब्रह्म सृष्टि फैली । घोर रुद्र दल नाश हुआ गुहेश्वरा। Translated by: Eswara Sharma M and Govindarao B N
Tamil Translation நீரிலுள்ள ஒளி மேருவில் இணைந்தது தொலைவிலுள்ள ஐம்பூதம் இலிங்கதத்துவத்திலொன்றியது புரத்திலுள்ள ஐவரின் தலையை அரிந்து, நறுமணமானது சிந்தி சிதறியிருந்ததைக் கண்டேன், சுற்றியிருந்த உலகமானது வயலாயிற்று கோர, உருத்திரனின் திரள் மறைந்தது குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಐವರು = ಆ ದೇಹದೊಳಗಿರುವ ಪಂಚಜ್ಞಾನೇಂದ್ರಿಯಗಳು; ಓಕುಳಿಯಾಡು = ಎರಚಾಡು, ಸೂರಾಡು, ಸೂಸು; ಘೋರ ರುದ್ರನ ದಳ = ಜೀವನವನ್ನು ಅಸ್ತವ್ಯಸ್ತಗೊಳಿಸುವ ಚಿಂತೆ, ಭಯ, ಭ್ರಾಂತಿ, ದುಃಖ ಮುಂತಾದವುಗಳು; ಜ್ಯೋತಿ = ಆ ಮನಸ್ಸಿನಲ್ಲಿ ಮೂಡಿದ ಜ್ಞಾನದ ಬೆಳಕು; ಅರಿವಿನ ಪ್ರತಿಬಿಂಬ; ಜೀವಾತ್ಮ; ಧಾತು = ಭೂತ; ಅವು ಐದು, ಭೂಮ್ಯಾದಿ; ಆ ಧಾತುಗಳಿಂದ ರೂಪುಗೊಂಡುದು ದೇಹ; ಅದು ದೂರದ ಧಾತು; ಅನಂತರ ನಿರ್ಮಾಣಗೊಂಡ ಭೌತಿಕ ರಚನೆ; ನೀರು = ಮನಸ್ಸು; ಪುರ = ಹಲವು ತತ್ವ್ತಗಳಿಂದ ಕೂಡಿದ ದೇಹ; ಬ್ರಹ್ಮನ ಓಲಗ = ಬ್ರಹ್ಮಸೃಷ್ಟಿ, ವಿಶ್ವ; ಮುರಿಯಿತ್ತು = ನಾಶವಾಯಿತ್ತು; ಮೇರು = ಸಮುನ್ನತವಾದ ತತ್ವ್ತ; ಪರಾತ್ಪರವಸ್ತು; ಲಿಂಗ; ಶಿರ = ಆಯಾ ಇಂದ್ರಿಯಗಳ ಮೂಲಕ ಉಂಟಾಗುವ ಶಬ್ದಾದಿ ಐದು ವೃತ್ತಿಜ್ಞಾನಗಳು; ಸಾರಾಯ = ಲಿಂಗತತ್ವ್ತ; ಸಾರಿರ್ದ = ಸುತ್ತಮುತ್ತಲಿನ; ಹರೆಯಿತ್ತು = ಬಯಲಾಗಿತ್ತು; Written by: Sri Siddeswara Swamiji, Vijayapura