ನಾನು ಭಕ್ತನಾದಡೆ, ನೀನು ದೇವನಾದಡೆ,
ನೋಡುವೆವೆ ಇಬ್ಬರ ಸಮರಸವನೊಂದು ಮಾಡಿ?
ಭೂಮಿಯಾಕಾಶವನೊಂದು ಮಾಡಿ,
ಚಂದ್ರ-ಸೂರ್ಯರಿಬ್ಬರ ತಾಳವ ಮಾಡಿ ಆಡುವೆವೆ?
ಜಡೆಯ ಮೇಲಣ ಗಂಗೆ ನೀನು ಕೇಳಾ,
ತೊಡೆಯ ಮೇಲಣ ಗೌರಿ ನೀನು ಕೇಳಾ,
ಗುಹೇಶ್ವರನೆಂಬ ಲಿಂಗವು ಎನ್ನ ಕೈಯಲ್ಲಿ ಸತ್ತಡೆ,
ರಂಡೆಗೂಳನುಂಬುದು ನಿಮಗೆ ಲೇಸೆ?
Transliteration Nānu bhaktanādaḍe, nīnu dēvanādaḍe,
nōḍuveve ibbara samarasavanondu māḍi?
Bhūmiyākāśavanondu māḍi,
candra-sūryaribbara tāḷava māḍi āḍuveve?
Jaḍeya mēlaṇa gaṅge nīnu kēḷā,
toḍeya mēlaṇa gauri nīnu kēḷā,
guhēśvaranemba liṅgavu enna kaiyalli sattaḍe,
raṇḍegūḷanumbudu nimage lēse?
Hindi Translation मैं भक्त हूं तो, तुम देव हो तो देख सकते
दोनों के समरस एककर न देखें तो ?
भूमि आकाश एक कर ,
चंद्रसूर्य को तालमेल कर देखें तो ?
जटा पर गंगा तुम सुनो ,
जाँघ पर गौरी तुम सुनो
गुहेश्वर नामक लिंग मेरे हाथ पर मरे तो
रांड का जूठन खाना आप मानेंगे ?
Translated by: Eswara Sharma M and Govindarao B N
Tamil Translation நான் பக்தன் நீ இலிங்கமென காணவியலுமோ
இருவரையும் சமமாகக் காணவியலுமோ?
பூமி, ஆகாயத்தை ஒருங்கிணைத்து
சந்திர, சூரியரை இணைத்துத் துய்ப்பாய்
ஜடையின் மீதுள்ள கங்கை நீ கேட்பாய்.
தொடையின் மீதுள்ள கௌரி நீ கேட்பாய்
குஹேசுவரலிங்கம் என் கையிலிருந்து அகன்றால்
கணவனை யிழந்தோர் என்பது மங்கலமாகுமோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆಕಾಶ = ದೇಹದೊಳಗಿರುವ ಚೈತನ್ಯ, ಆತ್ಮ; ಆಡು = ಅನುಭವಿಸು; ಚಂದ್ರ = ಪ್ರಾಣದ ಒಳಮುಖ ಗತಿ; ಜಡೆಯ ಮೇಲಣ ಗಂಗೆ = ಶಿರೋಮಧ್ಯದಲ್ಲಿ ವ್ಯಕ್ತವಾಗುವ ಜ್ಞಾನಶಕ್ತಿ; ತಾಳವ ಮಾಡಿ = ಒಂದುಗೂಡಿಸಿ, ಶ್ರುತಿಗೂಡಿಸಿ; ತೊಡೆಯ ಮೇಲಣ ಗೌರಿ = ದೇಹದಲ್ಲಿ ವ್ಯಕ್ತವಾಗುವ ಕ್ರಿಯಾಶಕ್ತಿ; ನೋಡುವೆವೆ = ನೋಡಬಲ್ಲೆವೆ? ನೋಡಲಾರೆವು; ಭೂಮಿ = ಜಡತತ್ವ್ತಗಳಿಂದ ನಿರ್ಮಿತವಾದ ದೇಹ; ಸೂರ್ಯ = ಪ್ರಾಣದ ಹೊರಮುಖ ಗತಿ;
Written by: Sri Siddeswara Swamiji, Vijayapura