ಸರ್ವಾಂಗ ಲಿಂಗಸ್ವಾಯತವಾದ ಶರಣಂಗೆ,
ದೇಹ ದಹನವಾಗಲಾಗದು, ನಿಕ್ಷೇಪಿಸದೆ ಇರಲಾಗದು
ಸಂಸಾರಸಂಗದ ಕಷ್ಟವ ನೋಡಾ!
ಅನಾಹತದಲ್ಲಿ ನಿರೂಪ ಸ್ವಾಯತ,
ಗುಹೇಶ್ವರಾ, ನಿಮ್ಮ ಶರಣರಂತಹರಿಂತಹರೆಂದಡೆ,
ನಾಯಕನರಕ.
Transliteration Sarvāṅga liṅgasvāyatavāda śaraṇaṅge,
dēha dahanavāgalāgadu, nikṣēpisade iralāgadu
sansārasaṅgada kaṣṭava nōḍā!
Anāhatadalli nirūpa svāyata,
guhēśvarā, nim'ma śaraṇarantaharintaharendaḍe,
nāyakanaraka.
Hindi Translation सर्वांग स्वायत शरण का
देह दग्ध नहीं होता, निक्षेप नहीं होता ।
संसार संग का कष्ट देखो ।
अनाहत में अगोचर है ।
गुहेश्वरा, तुम्हारे शरणों को
ऐसे वैसे कहें तो नायक नरक है ।
Translated by: Eswara Sharma M and Govindarao B N
Tamil Translation உடல், மனத்தில் இலிங்கம் வீற்றுள்ள சரணனின்
உடலை எரிக்கவியலாது, புதைக்கவியலாது!
உலகியல் வாழ்வின் துயரத்தைக் காணாய்.
இதய ஆழத்தில் மறைந்துள்ள இலிங்கம்!
குஹேசுவரனே, உம் சரணர்கள் அத்தகையோர்
இத்தகையோரெனின் கொடுமையான நரகமாம்!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನಾಹತ = ಹೃದಯಾಂತರಾಳ; ದಹನ = ಅಗ್ನಿಸಂಸ್ಕಾರ; ನಿಕ್ಷೇಪ = ಭೂಮಿಯಲ್ಲಿ ಇರಿಸಿ ಸಂಸ್ಕರಿಸುವುದು; ನಿರೂಪ = ದೃಷ್ಟಿಗೋಚರವಾಗುವ ರೂಪು ಇಲ್ಲದುದು, ಅಗೋಚರ; ಸರ್ವಾಂಗ = ಬಾಹ್ಯಾಂಗ ಮತ್ತು ಅಂತರಂಗ; ದೇಹ ಮತ್ತು ಮನಸ್ಸು; ಸ್ವಾಯತ = ಲಿಂಗಸ್ಪರ್ಶ, ಲಿಂಗಧಾರಣ;
Written by: Sri Siddeswara Swamiji, Vijayapura