ತೆಗೆದು ವಾಯುವ ನೇಣ
ಗಗನದಲ್ಲಿ ಗಂಟಿಕ್ಕಿ,
ತ್ರಿಜಗಾಧಿಪತಿಯ ಕೋಣೆಯಲ್ಲಿ ಹಸುವಿದ್ದು,
ಕರುವ ಕೊಂದು ಕಂದಲನೊಡೆದು,
ಕರೆಯಬಲ್ಲವಂಗಲ್ಲದೆ,
ಹಯನಾಗದು ನೋಡಾ!
ಹಯನೆ ಬರಡು, ಬರಡೆ ಹಯನು!
ಅರುಹಿರಿಯರ ಬಾಯ,
ಕರು ಒದೆದು ಹೋಯಿತ್ತು!
ಎರಡಿಲ್ಲದ ನಿರಾಳ ಗುಹೇಶ್ವರ.
Art
Manuscript
Music
Your browser does not support the audio tag.
Courtesy:
Transliteration
Tegedu vāyuva nēṇa
gaganadalli gaṇṭikki,
trijagādhipatiya kōṇeyalli hasuviddu,
karuva kondu kandalanoḍedu,
kareyaballavaṅgallade,
hayanāgadu nōḍā!
Hayane baraḍu, baraḍe hayanu!
Aruhiriyara bāya,
karu odedu hōyittu!
Eraḍillada nirāḷa guhēśvara.
Hindi Translation
नाभी से वायु निकालकर सहस्रार मंडल में स्थितकर,
त्रिजगाधिपति की कोठी में गाय हो तो,
बछडा मारकर घडा फोडकर
दुहना जाननेवाले के बिना दूध नहीं मिलता देखो ,
गाय बाँझ, बाँझ गाय !
अपने को ज्ञानी समझे हुए को बछडे ने मारा।
दो नहीं, निर्मल गुहेश्वरा।
Translated by: Eswara Sharma M and Govindarao B N
Tamil Translation
காற்றை உள்ளிழுத்து, மந்திரத்தை ஆகாயத்தில்
பிணைத்து மூவுலகை ஆள்பவனின் மண்டலத்தில்
பசு இருக்க, கன்றை நிறுத்தி, பானையை உடைத்து
கறக்க வல்லவர்க்கன்றி அமுதம் கிட்டுமோ!
கறவைப்பசுவே ஈனாப்பசுவாம், ஈனாப்பசுவே கறவைப்பசுவாம்!
பகட்டினரின் வாயைக் கன்று உதைத்தது
இரண்டற்ற தூயோன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು
ಅರುಹಿರಿಯರು = ತಮ್ಮಷ್ಟಕ್ಕೆ ತಾವು ಎಲ್ಲವನ್ನೂ ಅರಿತವರು, ಎಲ್ಲರಿಗಿಂತಲೂ ಹಿರಿಯರು ಎಂದು ಭ್ರಮಿಸುವ ಜನ; ಕಂದಲು = ಮಡಕೆ, ದೇಹಭಾವನೆ; ಕರು = ಸುಖಕ್ಕಾಗಿ ಧಾವಿಸುತ್ತಿರುವ ಮನಸ್ಸು; ಕೊಂದು = ನಿಲ್ಲಿಸಿ; ಗಂಟಿಕ್ಕು = ಬಂಧಿಸು, ನಿಲ್ಲಿಸು; ಗಗನ = ಸಹಸ್ರಾರ ಮಂಡಲ; ತೆಗೆದು = ಮೇಲೆತ್ತಿ; ತ್ರಿಜಗಾಧಿಪತಿಯ ಕೋಣೆ = ಮೂರು ಲೋಕದ ಅಧಿಪತಿಯ ಮಂದಿರ, ಬ್ರಹ್ಮನಿಲಯ, ಪರಮೇಶ್ವರನ ಮಂಡಲ, ಸಹಸ್ರಾರ; ನಿರಾಳ = ಅತ್ಯಂತ ನಿರ್ಮಲನು, ನಿರಾಳಲಾದ ಶಿವನ ಅದ್ವಯಾನುಭೂತಿ ಪಡೆದವನು; ನೇಣು = ಶಿವಸೂತ್ರ, ಮಂತ್ರ, ಹಂಸ, ಸೋsಹಂ; ಬರಡು = ಹಿಂಡದ ಆಕಳು; ವಾಯು = ಪ್ರಾಣ, ಪ್ರಾಣಶಕ್ತಿ; ಹಯನಾಗದು = ಅಮೃತರಸ ದೊರೆಯದು; ಹಯನು = ಹಿಂಡುವ ಆಕಳು; ಹಸು = ಆನಂದರಸವನ್ನು ಕರೆಯುವ ಅಮೃತಮಯೀ ಪ್ರಜ್ಞೆ, ಶಿವಪ್ರಜ್ಞೆ;
Written by: Sri Siddeswara Swamiji, Vijayapura