Index   ವಚನ - 104    Search  
 
ನೋಡುವೆನೆಂದಡೆ ನೋಟವಿಲ್ಲ; ಕೇಳುವೆನೆಂದಡೆ ಕಿವಿಯಿಲ್ಲ; ವಾಸಿಸುವೆನೆಂದಡೆ ನಾಸಿಕವಿಲ್ಲ; ನುಡಿವೆನೆಂದಡೆ ಬಾಯಿಯಿಲ್ಲ ಹಿಡಿವೆನೆಂದಡೆ ಹಸ್ತವಿಲ್ಲ; ನಡೆವೆನೆಂದಡೆ ಕಾಲಿಲ್ಲ; ನೆನೆವೆನೆಂದಡೆ ಮನವಿಲ್ಲ.ಇಂತು ನೆನೆಹು ನಿಷ್ಪತ್ತಿಯಾಗಿ, ಶರಣರ ಪಾದದಲ್ಲಿಯೆ ಬೆರೆದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯಚೆನ್ನಬಸವಣ್ಣಾ.