Index   ವಚನ - 105    Search  
 
ಆಧಾರವ ಬಲಿಯೆ ಬೇಗೆವರಿಯಿತ್ತು ಕಿಚ್ಚು ಆವರಿಸಿ ಊರ್ಧ್ವಕ್ಕೇರಿತ್ತು. ಸಾಸಿರ ದಳದ ಅಮೃತದ ಕೊಡ ಕಾಯಿತ್ತು. ಕಾಯ್ದ ಅಮೃತ ಉಕ್ಕಿ ತೊಟ್ಟಿಕ್ಕೆ, ಅಮೃತವನುಂಡು ಹಸಿವು ಕೆಟ್ಟಿತ್ತು; ತೃಷೆಯಡಗಿತ್ತು; ನಿದ್ರೆಯರತಿತ್ತು; ಅಂಗ ಗುಣವಳಿಯಿತ್ತು; ಲಿಂಗ ಗುಣ ನಿಂದಿತ್ತು; ಸಂಗಸುಖ ಹಿಂಗಿತ್ತು. ಅಂಗಲಿಂಗವೆಂಬ ಉಭಯವಳಿದು, ಮಂಗಳ ಮಹಾಬೆಳಗಿನಲ್ಲಿಯೇ ಓಲಾಡಿ ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.

C-353 

  Thu 24 Aug 2023  

 Vishleshan ,bahal super vachanait ek , antrang vachan ,killa vachan vishleshan feed marathi appaji
  Mallikarjun Mulage