•  
  •  
  •  
  •  
Index   ವಚನ - 247    Search  
 
ಗಗನ ಮಂಡಳದ ಸೂಕ್ಷ್ಮನಾಳದಲ್ಲಿ `ಸೋಹಂ ಸೋಹಂ' ಎನುತ್ತಿರ್ದತ್ತದೊಂದು ಬಿಂದು, ಅಮೃತದ ವಾರಿಧಿಯ ದಣಿಯುಂಡ ತೃಪ್ತಿಯಿಂದ. ಗುಹೇಶ್ವರಾ ನಿಮ್ಮಲ್ಲಿಯೆ ಎನಗೆ ನಿವಾಸವಾಯಿತ್ತು.
Transliteration Gagana maṇḍaḷada sūkṣmanāḷadalli `sōhaṁ sōhaṁ' enuttirdattadondu bindu, amr̥tada vāridhiya daṇiyuṇḍa tr̥ptiyinda. Guhēśvarā nim'malliye enage nivāsavāyittu.
Hindi Translation गगन मंडल के सूक्ष्म नाल में सोऽहं सोऽहं कह रहा था एक बिंदु | अमृत जल मनभर खाने की त्रुप्ति से गुहेश्वरा तुम में ही निवास हुआ। Translated by: Eswara Sharma M and Govindarao B N
Tamil Translation ஆகாய மண்டலத்தின் சூட்சுமநாளத்தில் “ஸோஹம் ஸோஹம்” என்றது ஒரு பிந்து அமுதப் பெருக்கை தணிய அருந்திய நிறைவால் குஹேசுவரனே, உம்மிடமே நான் உறைகிறேன். Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಮೃತವಾರಿ = ಅಮೃತರಸ; ಗಗನಮಂಡಲ = ಸಹಸ್ರಾರವೆಂಬ ಊರ್ಧ್ವಮಂಡಲ; ಬಿಂದು = ಜೀವಬಿಂದು, ಪ್ರಜ್ಞಾಬಿಂದು; ಅನುಭವದ ಹಂತಕ್ಕೇರಿದ ಸಾಧಕಜೀವ; ಸೂಕ್ಷ್ಮನಾಳ = ಬ್ರಹ್ಮರಂಧ್ರ, ಸುಷುಮ್ನೆಯ ಅಂತಿಮ ಭಾಗ; ಸೋಹಂ = ಅವನೇ ನಾನು. ಸರ್ವವ್ಯಾಪಕನೂ ಸರ್ವಾಂತರ್ಯಾಮಿಯೂ ಹಾಗೂ ಸರ್ವಸಾಕ್ಷಿಯೂ ಆದ ಶಿವನೇ ನಾನು; Written by: Sri Siddeswara Swamiji, Vijayapura