ಮೊಲೆಯಿಲ್ಲದಾವಿಂಗೆ ತಲೆ[ಯೆ] ಮೊಲೆ!
ಮನದಲ್ಲಿ ಉಣ್ಣು ಕಂಡಾ, ಮನದಲ್ಲಿ ಉಣ್ಣು ಕಂಡಾ!
ತಾ ಸತ್ತು, ಹಾಲ ಕುಡಿಯ ಬಲ್ಲಡೆ,
ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ!
Transliteration Moleyilladāviṅge tale[ye] mole!
Manadalli uṇṇu kaṇḍā, manadalli uṇṇu kaṇḍā!
Tā sattu, hāla kuḍiya ballaḍe,
guhēśvaranemba liṅgavu tāne kaṇḍā!
Hindi Translation बिना स्तन धेनु को सिर ही स्तन है!
मन में ही खाओ , मन में ही खाओ!
खुद मरकर दूध पीये तो ,
गुहेश्वर नामक लिंग खुद ही है।
Translated by: Eswara Sharma M and Govindarao B N
Tamil Translation முலையற்ற பசுவிற்குத் தலையே முலை!
அகமனத்திலருந்துவாய், அகமனத்திலருந்துவாய்!
“தான்”அகன்று பாலை அருந்தவியலன்றால்
குஹேசுவரன் எனும் இலிங்கமாகத் திகழ்வான்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆವು = ಕಾಮಧೇನು, ಯೋಗಿಗಳಿಗೆ ಮಾತ್ರ ಕಾಣಬರುವ ಆನಂದಮೂಲ; ಅಮೃತ ಬಿಂದು; ತಲೆ = ಶಿವಜ್ಞಾನ, ಸರ್ವಾಧಾರನೂ ಸರ್ವವ್ಯಾಪಕನೂ ಶಿವನೆ ಎಂಬ ಜ್ಞಾನ; ತಾ ಸತ್ತು = ದೇಹ ನಾನು, ಪ್ರಾಣವು ನಾನು, ಕರಣಗಳು ನಾನು ಎಂದು ಅಭಿಮಾನಿಸುವ ಜೀವಭಾವವು ಇಲ್ಲದಾಗಿ; ಮನದಲ್ಲಿ = ಉನ್ಮನದಲ್ಲಿ; ಮೊಲೆ = ಆನಂದವನ್ನು ಹರಿಸುವ ಅವಯವ; ಮೊಲೆಯಿಲ್ಲ = ಆ ಯೌಗಿಕ ಕಾಮಧೇನುವಿಗೆ ಸಾಂಸಾರಿಕ ಸುಖರಸವನ್ನು ಒಸರುವ ಮೊಲೆಯಿಲ್ಲ;
Written by: Sri Siddeswara Swamiji, Vijayapura