Index   ವಚನ - 1    Search  
 
ಅಂಗದ ಸಂಗವ ಹಿಂಗಿ ಅಂಗವನಳಿದೆನಯ್ಯ. ಆ ಅಂಗವನಳಿದ ಬಳಿಕ 'ಅಣೋರಣೀಯಾನ್ ಮಹತೋಮಹೀಯಾನ್' ಎಂಬ ಶಬ್ದವಡಗಿತ್ತು. ಮನವನರಿದು, ಆ ಮನ ಘನವ ತಿಳಿದು, ಆನು ಬದುಕಿದೆನಯ್ಯ; ಆನು ಸುಖಿಯಾದೆನಯ್ಯ. ಆನು ಇಹಪರದ ಹಂಗಹರಿದು, ಸುಖ ವಿಸುಖ ಪ್ರಸನ್ನರೂಪಾಯಿತ್ತಯ್ಯ ಸಂಗಯ್ಯ.