ಅತೀತವಡಗಿ, ನಿರಾಲಂಬದ ಮನದ ಮೂರ್ತಿಯಂ ತಿಳಿದು,
ಮನೋವ್ಯಾಧಿಯಂ ಪರಿಹರಿಸಿಕೊಂಡು,
ಭಾವದ ಸೂತಕವಳಿದು ಬ್ರಹ್ಮದ ನೆಮ್ಮುಗೆಯಂ ತಿಳಿದು,
ಮನ ವಿಶ್ರಾಂತಿಯನೆಯ್ದಿ, ವಿಚಾರದನುಭವವನರಿದು,
ವಿವೇಕದಿಂದಾನು ವಿಶೇಷ ಸುಖವ ಕಂಡೆನಯ್ಯಾ
ಸಂಗಯ್ಯಾ, ಬಸವನಿಂದಲಿ.
Art
Manuscript
Music
Courtesy:
Transliteration
Atītavaḍagi, nirālambada manada mūrtiyaṁ tiḷidu,
manōvyādhiyaṁ pariharisikoṇḍu,
bhāvada sūtakavaḷidu brahmada nem'mugeyaṁ tiḷidu,
mana viśrāntiyaneydi, vicāradanubhavavanaridu,
vivēkadindānu viśēṣa sukhava kaṇḍenayyā
saṅgayyā, basavanindali.