Index   ವಚನ - 20    Search  
 
ಅನುಭಾವದ ಸಾರವೆ ನಿಜಸಾರವಾಗಿ ನಿಂದನೆಮ್ಮ ಬಸವಯ್ಯನು. ವಿವೇಕದ ಸಂಗವೆ ನಿಜಸಂಗವಾಗಿ ನಿಂದನೆಮ್ಮ ಬಸವಯ್ಯನು. ಭಾವದ ಬಯಲಿಂಗೆ ಬಣ್ಣವಿಟ್ಟನೆಮ್ಮ ಬಸವಯ್ಯನು. ಇತರೇತರ ಮಾರ್ಗವಳಿದು, ಗಮನ ನಾಸ್ತಿಯಾದನೆಮ್ಮ ಬಸವಯ್ಯನು. ಸಂಗಯ್ಯನಲ್ಲಿ ಉಭಯಕುಳನಾಸ್ತಿಯಾದನೆಮ್ಮ ಬಸವಯ್ಯನು.