Index   ವಚನ - 31    Search  
 
ಅಲ್ಲಮನ ವಂಶದವಳು ನಾನು. ಆಜಾತ ಶರಣರ ವಂಶದವಳು ನಾನು. ಅಪ್ರತಿಮ ಶರಣರ ವಂಶದವಳು ನಾನು. ಆಗಮಾನಂದಿಗಳ ವಂಶದವಳಾನು. ನಾನು ಆವ ದೇಶದಲ್ಲಿಯಿದ್ದಡೇನು? ನಾನು ಆವ ಸ್ಥಾನದಲ್ಲಿಯಿದ್ದಡೇನು? ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದನು.