Index   ವಚನ - 34    Search  
 
ಅಲ್ಲಲ್ಲಿಯ ಸುಖಂ ಭೋ ಎನ್ನಲಿಲ್ಲ. ಅಲ್ಲಲ್ಲಿಯ ಪಶುತ್ವವಿಲ್ಲಂ ಭೋ. ಆ ಪಶು ಕಾಯವಂ ಕಳೆದು ಆನು ಪರಿಣಾಮವಡಗಿದವಳಯ್ಯಾ. ಪರಿಣಾಮದ ವಿವರದಿಂದ ಪರವಸ್ತುವಿನ ನೆಲೆಯ ತಿಳಿದು, ಪರಮಪ್ರಸಾದಿಯಾದೆನು. ಪ್ರಾಣ ಯೋಗ ಪ್ರಸಾದಮೂರ್ತಿಯುಳ್ಳವಳಾದ ಕಾರಣ, ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ ಸಂಗಯ್ಯಾ.