ವಚನ - 252     
 
ಚಂದ್ರಕಾಂತದ ಗಿರಿಗೆ ಉದಕದ ಸಂಚ, ಸೂರ್ಯಕಾಂತದ ಗಿರಿಗೆ ಅಗ್ನಿಯ ಸಂಚ, ಪರುಷದ ಗಿರಿಗೆ ರಸದ ಸಂಚ. ಬೆರಸುವ ಭೇದವಿನ್ನೆಂತೊ? ಅಪ್ಪುವನು ಅಗ್ನಿಯನು ಪಕ್ವಕ್ಕೆ ತಂದು ಅಟ್ಟುಂಬ ಭೇದವನು ಗುಹೇಶ್ವರ ನಿಮ್ಮ ಶರಣ ಬಲ್ಲ.