ಆರ ಸಂಗವೂ ಸ್ವಯವಲ್ಲವೆನಗೆ,
ಆರ ಹಂಗೂ ಸ್ವಯವಲ್ಲವೆನಗೆ,
ಆರ ಸಂಗವ ಮಾಡಿ ನಾನು
ಎಷ್ಟೆಷ್ಟು ಕಾಲ ಬಳಲ್ವೆನಯ್ಯ?
ಎನ್ನ ಸಂಗವಿಹಪರದ ಹಂಗಿನ ಸಂಗವಲ್ಲಯ್ಯ.
ಎನ್ನ ಸಂಗ ಸ್ವಯಲಿಂಗ ಸಂಬಂಧವಯ್ಯ ಸಂಗಯ್ಯ.
Art
Manuscript
Music
Courtesy:
Transliteration
Āra saṅgavū svayavallavenage,
āra haṅgū svayavallavenage,
āra saṅgava māḍi nānu
eṣṭeṣṭu kāla baḷalvenayya?
Enna saṅgavihaparada haṅgina saṅgavallayya.
Enna saṅga svayaliṅga sambandhavayya saṅgayya.