Index   ವಚನ - 59    Search  
 
ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು. ಕೂಟವಿಲ್ಲದ ಪುರುಷನ ಕಂಡು ಕಾಮದ ಆತುರಹಿಂಗಿತ್ತೆನಗೆ. ಏನೆಂದೆನ್ನದ ಮುನ್ನ ತಾನೆಯಾಯಿತ್ತು; ಸಂಗಯ್ಯನಲ್ಲಿ ಶಬ್ದಮುಗ್ಧವಾಯಿತ್ತು.