Index   ವಚನ - 72    Search  
 
ಎನ್ನಗಿನ್ನೇನು ಎನಗಿನ್ನೇನು ಎನಗಿನ್ನೇನು, ಎನಲೇನು ಕಾರಣ ಬಸವಾ? ಎನಗಿನ್ನಾವುದು ಪರಿಣಾಮದ ನೆಲೆಯಿಲ್ಲ ಬಸವಾ. ಎನಗೆ ನಿನ್ನ ರೂಪು ನಿರೂಪಾದ ಬಳಿಕ, ಭಕ್ತಿಸಾರಾಯದ ಪಥವನೊಲ್ಲೆನಯ್ಯಾ ಸಂಗಯ್ಯನ ಗುರುಬಸವಾ.