Index   ವಚನ - 82    Search  
 
ಎನಗೇನೂ ತೋರದಂದು ನಮ್ಮವ್ವೆಯ ಮಗನಾಗಿದ್ದ ನಮ್ಮ ಬಸವಯ್ಯನು. ಎನಗೇನೂ ಕಾಣಿಸದಂದು ಹುಟ್ಟಿಸುವ ಕರ್ತನಾಗಿದ್ದ ನಮ್ಮ ಬಸವಯ್ಯನು. ಸಂಗ ನಿಸ್ಸಂಗವಿಲ್ಲದಂದು ಸಮಯಾಚಾರಿಯಾಗಿದ್ದ ನಮ್ಮ ಬಸವಯ್ಯನು. ತನು ಮನ ಧನವಿಲ್ಲದಂದು ನಿರೂಪ ರೂಪ ಮಾಡಿದನಯ್ಯಾ ಸಂಗಯ್ಯಾ, ನಿಮ್ಮ ಬಸವಯ್ಯನು.