ಮದ್ದ ನಂಬಿ ಕೊಂಡಡೆ ರೋಗ ಮಾಣದಿಪ್ಪುದೆ?
ಸಜ್ಜನಿಕೆಯುಳ್ಳಡೆ ಪ್ರಸಾದಕಾಯ ಕೆಡುವುದೆ?
ಪ್ರಾಣ, ಲಿಂಗವಾದಡೆ ಪ್ರಾಣ ಬೇರಪ್ಪುದೆ?
ಪ್ರಾಣಲಿಂಗ ಪ್ರಸಾದವನು ತಿಳಿದು ನೀವು ನೋಡಿರೆ,
ನಾದ ಬಿಂದು ಸೂಸದ ಮುನ್ನ,
ಆದಿಯ ಪ್ರಸಾದವ ಭೇದಿಸಿಕೊಂಡರು-
ಗುಹೇಶ್ವರಾ ನಿಮ್ಮ ಶರಣರು.
Transliteration Madda nambi koṇḍaḍe rōga māṇadippude?
Sajjanikeyuḷḷaḍe prasādakāya keḍuvude?
Prāṇa, liṅgavādaḍe prāṇa bērappude?
Prāṇaliṅga prasādavanu tiḷidu nīvu nōḍire,
nāda bindu sūsada munna,
ādiya prasādava bhēdisikoṇḍaru-
guhēśvarā nim'ma śaraṇaru.
Hindi Translation विश्वास से दवा ले तो क्या रोग दूर नहीं होता ?
सदाचारी हो तो क्या प्रसाद शरीर बिगडता ?
प्राणलिंग हो तो क्या प्राण अलग होता ?
प्राणलिंग प्रसाद जानकर देखो।
नादबिंदु उमडने के पूर्व
आदि प्रसाद जान लिये ,
गुहेश्वरा, तुम्हारे शरण।
Translated by: Eswara Sharma M and Govindarao B N
Tamil Translation மருந்தை, நம்பி ஏற்பின் நோய் அகலாதோ?
நன்னெறியிருப்பின் பிரசாத உடல் கெடுமோ?
பிராணன் இலிங்கமென அறியின், பிராணன் விகற்பமாமோ?
பிராணலிங்க பிரசாதத்தை அறிமின்
நாதமும், பிந்துவும் மறையும் முன்னர்
ஆதியின் பிரசாதத்தை குஹேசுவரனே
உம் சரணர் உணர்ந்தனர்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆದಿಯ ಪ್ರಸಾದ = ಆದಿ ಎಂದರೆ ಸರ್ವಮೂಲತತ್ವ್ತಗಳು ತೋರುವ ಮುಂಚೆ ಇರುವ ಮಹಾಲಿಂಗ; ಅದರ ಅನುಭಾವರೂಪಜ್ಞಾನವೇ
ಆದಿಯಪ್ರಸಾದ; ಕೆಡುವುದೆ = ಆ ದೇಹದ ಪಾವಿತ್ರ್ಯ ನಷ್ಟವಾಗುವುದೆ? ಆಗದು; ನಾದ = ಸೂಕ್ಷ್ಮಸ್ಪಂದನ, ಚಲನತತ್ವ್ತ, ಸಂಚಲಶೀಲ ಮನಸ್ಸು; ಪ್ರಸಾದಕಾಯ = ಲಿಂಗಪ್ರಸಾದವನ್ನು ಸ್ವೀಕರಿಸಿ ಶುದ್ದವಾದ ದೇಹ; ಬಿಂದು = ವಸ್ತು, ಸ್ಥೂಲತತ್ವ್ತ, ಸ್ಥೂಲದೇಹ; ಭೇದಿಸಿಕೊಂಡರು = ಆತ್ಮಸಾಕ್ಷಾತ್ ಗೊಳಿಸಿಕೊಂಡರು; ಮದ್ದು = ಔಷಧ; ಸಜ್ಜನಿಕೆ = ಸದಾಚಾರಸಂಪನ್ನತೆ; ಸೂಸದ ಮುನ್ನ = ಮರೆಯಾಗದ ಮುನ್ನ;
Written by: Sri Siddeswara Swamiji, Vijayapura