ಎಲೆ ಶರಣರಿರಾ, ಎಲೆ ಭಕ್ತರಿರಾ,
ಭಕ್ತಿ ಕಾಂಡದ ಮೂಲಿಗನ ಕಾಣಿರೆ ಬಸವನ?
ಆ ಭಕ್ತಿಯ ಸಂಗದ ಶಿವೈಕ್ಯನ ಕಾಣಿರೆ ಬಸವನ?
ಭಕ್ತಿಯ ನಿಜಸಮಾಧಿಯ ಸುಖವ
ಕರುಣಿಸುವ ಅಯ್ಯ ಬಸವನ,
ಸಂಗಯ್ಯನ ಪ್ರಸಾದಿಯಾದ ಬಸವನ ಕಾಣಿರೆ ಭಕ್ತರು.
Art
Manuscript
Music
Courtesy:
Transliteration
Ele śaraṇarirā, ele bhaktarirā,
bhakti kāṇḍada mūligana kāṇire basavana?
Ā bhaktiya saṅgada śivaikyana kāṇire basavana?
Bhaktiya nijasamādhiya sukhava
karuṇisuva ayya basavana,
saṅgayyana prasādiyāda basavana kāṇire bhaktaru.