Index   ವಚನ - 119    Search  
 
ಏಕಾಂಗವೆನಗೆ ಅನೇಕ ಬಸವಾ, ಪ್ರಾಣ ಪ್ರಸನ್ನವದನೆಯಾದೆನು ಬಸವಾ, ಎನಗೆ ಏತರಲ್ಲಿಯೂ ಹಂಗಿಲ್ಲ ಬಸವಾ, ಇಷ್ಟದ ಸಂಗದ ಕುಳವಳಿದ ಬಳಿಕ ಪ್ರಾಣಯೋಗವಾಯಿತ್ತು ಬಸವಾ, ಸಂಗಯ್ಯಾ, ನಿಮ್ಮ ಬಸವನ ರೂಪು ಹೆಸರಿಲ್ಲದೆ ಹೋದ ಬಳಿಕ.