ಪಂಚೀಕೃತವೆಂಬ ಪಟ್ಟಣದೊಳಗೆ;
ಈರೈದು ಕೇರಿ, ನಾಲ್ಕೈದು ವೀದಿ, ಅಲ್ಲಿ ಹಾವ ಕಂಡೆ.
ಹಿಂಡುಗಟ್ಟಿ ಆಡುವ ಮದಗಜವ ಕಂಡೆ!
ಕೇಸರಿಯ ಕಂಡು ಮನ ಬೆದರಿತ್ತು ನೋಡಾ.
ಮೂವರರಸಿಂಗೆ ಇಪ್ಪತ್ತೈದು ಪರಿವಾರ,
ಅಂಜಂಜಿ ಬೆಳಗಾಯಿತ್ತು ಗುಹೇಶ್ವರಾ.
Transliteration Pan̄cīkr̥tavemba paṭṭaṇadoḷage;
īraidu kēri, nālkaidu vīdi, alli hāva kaṇḍe.
Hiṇḍugaṭṭi āḍuva madagajava kaṇḍe!
Kēsariya kaṇḍu mana bedarittu nōḍā.
Mūvararasiṅge ippattaidu parivāra,
an̄jan̄ji beḷagāyittu guhēśvarā.
Hindi Translation पंचीकृत जैसे पुर में दो-पाँच गलियाँ ।
चार पाँच रास्ते में साँप देखा।
झुंड सहित खेलते मदगज देखा।
केसरी देख मन घबरा देखो।
तीन रानियों के पच्चीस परिवार
भयभीत होते सबेरा हुआ गुहेश्वरा।
Translated by: Eswara Sharma M and Govindarao B N
Tamil Translation பஞ்சீகரணமெனும் பட்டணத்தில் பத்து சேரிகள்
இருபது வீதிகளில் பாம்பைக் கண்டேன்
திரள் திரளாக ஆடும் மதயானையைக் கண்டேன்
சிங்கத்தைக் கண்டு மனம் அஞ்சியது காணாய்
மூவரின் அரசியின் இருபத்தைந்து பரிவாரம்
அஞ்ச அஞ்ச பேரொளி தோன்றியது குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೇಸರಿ = ವಿವೇಕ; ನಾಲ್ಕೈದು ವೀದಿ = ಇಪ್ಪತ್ತು ಮಾರ್ಗಗಳು, ಆ ಪಟ್ಟಣದಲ್ಲಿ; ಮದಗಜಗಳು = ಅಷ್ಟಮದಗಳು; ಮೂವರರಸಿ = ಸತ್ವ,ರಜ ಮತ್ತು ತಮ ಎಂಬ ಮೂರು ಮಹಾ ಘಟಕಗಳ ಒಡತಿ, ಪ್ರಕೃತಿ; ಹಾವು = ಭ್ರಮೆ;
Written by: Sri Siddeswara Swamiji, Vijayapura