ಅಪ್ಪುವಿನ ಬಾವಿಗೆ ತುಪ್ಪದ ಘಟ;
ಸಪ್ಪಗೆ, ಸಿಹಿ ಎಂಬ ಎರಡಿಲ್ಲದ ರುಚಿ,
ಪರುಷ ಮುಟ್ಟದ ಹೊನ್ನು!
ಕರೆಸದ ಬೊಜಗನು ಬೆರಸದೆ ಬಸುರಾಯಿತ್ತ ಕಂಡೆನಾಹಾ!
ಅರುವಿನ ಆಪ್ಯಾಯನ ಮರಹಿನ ಸುಖವೊ!
ಇದು ಕಾರಣ,
ಮೂರು ಲೋಕವಳಿಯಿತ್ತು ಗುಹೇಶ್ವರಾ.
Transliteration Appuvina bāvige tuppada ghaṭa;
sappage, sihi emba eraḍillada ruci,
paruṣa muṭṭada honnu!
Karesada bojaganu berasade basurāyitta kaṇḍenāhā!
Aruvina āpyāyana marahina sukhavo!
Idu kāraṇa,
mūru lōkavaḷiyittu guhēśvarā.
Hindi Translation जल कुऐ को घी का मटका;
फीका- मीठा दोनों रहित रुची।
परुष स्पर्श रहित सोना।
बिना बुलाये बोजग बिना मिले गर्भ देखा।
ज्ञान का आप्यायन भूलने का सुख।
इस कारण तीन लोक नाश हुए गुहेश्वरा।
Translated by: Eswara Sharma M and Govindarao B N
Tamil Translation நீருள்ள வாவியிலே நெய்க்குடமாம்
இனிப்பு, சப்பை என்னும் இரண்டுமற்ற சுவை
பரிசவேதி தீண்டாத பொன்!
பரம்பொருளை அழைக்காமலே பேரின்பநிலையாம்
ஜீவனின் பேரின்பம் மறதியின் இன்பமாம்!
இதனால் மூவுலகும் அழிந்தது குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಪ್ಪುವಿನ ಬಾವಿ = ಯೋಗದ ಪರಿಭಾಷೆಯಲ್ಲಿ ಅಪ್ಪು ಎಂದರೆ ಅಮೃತರಸ, ಆ ರಸವುಳ್ಳ ಕೂಪವೆ ಅಪ್ಪುವಿನ ಬಾವಿ, ಅದು ಬ್ರಹ್ಮ ರಂಧ್ರ.; ಕರೆಸು = ಆಹ್ವಾನಿಸು; ತುಪ್ಪದ ಘಟ = ಸದ್ವಾಸನೆಯ ಘಟ; ಬೊಜಗ = ಪರವಸ್ತು;
Written by: Sri Siddeswara Swamiji, Vijayapura