ಕರಣಂಗಳ ಹಂಗಹರಿದು,
ಕರಣಂಗಳ ಮುಖವನಳಿದು,
ಶರಣರ ಪರಿಣಾಮದಲ್ಲಿ ಮುಕ್ತಿಯನರಿದೆನಯ್ಯಾ.
ಬಸವನ ಕುರುಹ ಕಂಡು ಪ್ರಸನ್ನೆಯಾದೆನಯ್ಯಾ.
ಪ್ರಸನ್ನಪರಿಣಾಮವಿಡಿದು
ಆನು ಬದುಕಿದೆನಯ್ಯಾ ಸಂಗಯ್ಯಾ.
Art
Manuscript
Music
Courtesy:
Transliteration
Karaṇaṅgaḷa haṅgaharidu,
karaṇaṅgaḷa mukhavanaḷidu,
śaraṇara pariṇāmadalli muktiyanaridenayyā.
Basavana kuruha kaṇḍu prasanneyādenayyā.
Prasannapariṇāmaviḍidu
ānu badukidenayyā saṅgayyā.