Index   ವಚನ - 149    Search  
 
ಕುಲವಳಿದ ಹೆಣ್ಣ ಕಣ್ಣ ಬಯಲ ಕಂಡು ಕುಲವಡಗಿ ಸಂಗ ಸ್ವಯರೂಪಾಯಿತ್ತಯ್ಯ. ಪ್ರಭೆಯರಿದು ಪ್ರಸನ್ನರೂಪವ ಕಂಡು ಪ್ರಕಾಶಮೂರ್ತಿಯಾದನಯ್ಯ. ಪ್ರಣಮಾಕ್ಷರ ಕಾಯರೂಪು ನಿರೂಪಾಯಿತ್ತಯ್ಯಾ. ಅಪ್ರಮಾಣವಧಿಕಸ್ಥಲ ಸಂಬಂಧವಯ್ಯ ಸಂಗಯ್ಯ.