Index   ವಚನ - 163    Search  
 
ತ್ರಿವಿಧದ ಮಾಟವಿಲ್ಲವೆನಗೆ ಬಸವಾ. ತ್ರಿವಿಧದ ಪ್ರಸಾದವಿಲ್ಲವೆನಗೆ ಬಸವಾ. ತ್ರಿವಿಧದ ಕುರುಹಿಲ್ಲವೆನಗೆ ಬಸವಾ. ತ್ರಿವಿಧದ ಗೊತ್ತಿಲ್ಲವೆನಗೆ ಬಸವಾ. ಸಂಗಯ್ಯನಲ್ಲಿ ಬಸವ ಬಯಲಾದ ಬಳಿಕ.