ನಾನು ನಿಮ್ಮವಳಲ್ಲವಯ್ಯಾ,
ನಾನು ಅನಿಮಿಷನವರವಳು.
ನಾನು ನಿಮ್ಮವಳಲ್ಲವಯ್ಯಾ,
ನಾನು ಅಜಗಣ್ಣನವರವಳು.
ನಾನು ನಿಮ್ಮವಳಲ್ಲವಯ್ಯಾ,
ನಾನು ಪ್ರಭುವಿನ ಸಂತತಿಯವಳು.
ನಾನು ನಿಮ್ಮವಳಲ್ಲವಯ್ಯಾ,
ನಾನು ಮಾದಾರಚೆನ್ನಯ್ಯನ ಮೊಮ್ಮಗಳು.
ನಾನು ನಿಮ್ಮವಳಲ್ಲವಯ್ಯಾ,
ನಾನು ಪ್ರಸಾದಿಗಳ ಮನೆಯ ಕೀಳುದೊತ್ತು.
ನಾನು ನಿಮ್ಮವಳಲ್ಲವಯ್ಯಾ, ಸಂಗಯ್ಯ,
ನಾನು ಬಸವಯ್ಯನ ಮನೆಯ ತೊತ್ತಿನ ಮಗಳು.