Index   ವಚನ - 184    Search  
 
ನಿರ್ಮೂಲವಾಯಿತ್ತಾಹಾ! ನಿರಾಲಂಬವಾಯಿತ್ತಾಹಾ! ನಿರಾಕುಳವಾಯಿತ್ತಾಹಾ! ಪುಣ್ಯದಫಲ ತೋರಿ ಬಯಲನೆ ಕೂಡಿತ್ತು. ಆ ಬಯಲು ನಿರ್ವಯಲಾಯಿತ್ತು. ಆ ನಿರ್ವಲಯನುಡುಗಿ ನಿಜಸುಖಿಯಾದೆನಯ್ಯಾ ನಾನು. ಸಂಗಯ್ಯನಲ್ಲಿ ನಿಶ್ಶೂನ್ಯವಾಯಿತ್ತಯ್ಯಾ.