Index   ವಚನ - 190    Search  
 
ನೆನೆಯಲಾಗದು ಎನ್ನ ಹೆಣ್ಣೆಂದು ನೀವು ಭಕ್ತರು. ನೆನೆಯಲಾಗದು ಎನ್ನ ಭಕ್ತೆಯೆಂದು ನೀವು ಶರಣರು. ನೆನೆಯಲಾಗದು ಎನ್ನ ಮುಕ್ತೆಯೆಂದು ನೀವು ಶರಣರು. ನೆನೆಯಲಾಗದು ಎನ್ನ ರೂಪು ನಿರೂಪಿಯಾದವಳೆಂದು ನೀವು ನೆನದಹನೆಂಬ ನೆನಹು ನೀವೆ ನೀವೆಯಾದ ಕಾರಣ ಸಂಗಯ್ಯನಲ್ಲಿ ಪುಣ್ಯವಿಲ್ಲದ ಹೆಣ್ಣ ನೀವೇತಕ್ಕೆ ನೆನೆವಿರಿ?