Index   ವಚನ - 210    Search  
 
ಬಹಿರಂಗದಾರೋಗಣೆಯ ರುಚಿಯನರಿಯಬಾರದು ಏನು ಕಾರಣವೋ ಲಿಂಗಯ್ಯ? ಅಂತರಂಗದಾರೋಹಣೆಯ ಮಹಂತನೇ ಬಲ್ಲನೋ ಲಿಂಗಯ್ಯ.ಅರಿದು ಮರದವಂ ವಿರೋಧನೆ? ಸಜ್ಜನಕ್ಕೆ ಉಪಸಾಕ್ಷಿಯುಂಟೇ ಲಿಂಗಯ್ಯಾ? ಅರುಹು ಸೋಂಕಿದ ಬಳಿಕ ನೋಡಲಿಲ್ಲ ಕೂಡಲಿಲ್ಲ ಸಂಗಯ್ಯನ.