Index   ವಚನ - 213    Search  
 
ಬ್ರಹ್ಮದ ನೆಮ್ಮುಗೆಯನಳಿದೆ ಭಾವದ ಸೂತಕವ ಕಳೆದೆ ಎನಗೆ ಹಿತವರಿಲ್ಲದೆ ನಾನಳಿದೆ. ಏನಯ್ಯ ಏನಯ್ಯವೆಂಬ ಶಬ್ದವಿಂದಿಂಗೆ ಬಯಲೆ ಪರಿಣಾಮದ ಸುಖ ಬ್ರಹ್ಮದಲ್ಲಿಯಡಕವೆ ಎನಗೆ? ಹುಟ್ಟಿಲ್ಲ ಹೊಂದಿಲ್ಲದ ಮೂರ್ತಿಯಾದೆನೆ. ಸಂಗಯ್ಯ, ಬಸವನ ಕೂಡಿ ಎನ್ನ ಕಾಯವ ನಾನಳಿದೆನೆ.