Index   ವಚನ - 279    Search  
 
ಹಂದೆಯಲ್ಲ ನಾನು,ಹರುಷದ ಧೈರ್ಯವುಳ್ಳ ಹೆಣ್ಣು ನಾನು. ಕಾಮವನಳಿದವಳಾನಾದ ಕಾರಣ ಬಸವನ ಹಂಗೆನಗಿಲ್ಲವಯ್ಯ. ಭ್ರಮೆಯಡಗಿ ಕಲೆ ನಷ್ಟವಾಗಿ ಮುಖವರತು ಮನವಿಚಾರವ ಕಂಡೆನಯ್ಯ ಸಂಗಯ್ಯ.